ವಿಕಿಪೀಡಿಯ ಮತ್ತು ಕರ್ನಾಟಕ
ಸುಮಾರು ಒಂದು ವರ್ಷದ ಮೇಲೆ ನನ್ನ ಬ್ಲಾಗ್ ಅಪ್‌ಡೇಟ್ ಮಾಡುತ್ತಾ ಇದ್ದೀನಿ. ನೀನು ಬ್ಲಾಗ್ ಅಪ್‌ಡೇಟ್ ಮಾಡದೆ ಇದ್ದರೆ ನಿನ್ನ ಜೊತೆ ಮಾತನ್ನೇ ಬಿಟ್ಟಿಬಿಡುತ್ತೇನೆ ಅನ್ನೋ ಕೆಲವು ಸ್ನೇಹಿತರ ಧಮಕಿಯ ಮಧ್ಯೆಯೂ ಬ್ಲಾಗ್ ಅಪ್‌ಡೇಟ್ ಮಾಡದೆ ಇರುವ ಧೈರ್ಯ ಉಳಿಸಿಕೊಂಡು ಬಂದಿದ್ದೇನೆ. ಏನಾದರೂ ಅಪ್‌ಡೇಟ್ ಮಾಡಲೇಬೇಕು ಅಂತ ತುಂಬಾ ದಿನದಿಂದ ಯೋಚಿಸುತ್ತಿದ್ದವನಿಗೆ ಈಗ ಸರಿಯಾದ ಕಾಲ, ಕಾರಣ ಹುಡುಕಿಕೊಂಡು ಬಂದಿದೆ.
ವಿಕಿಪೀಡಿಯ ಯಾರಿಗೆ ಗೊತ್ತಿಲ್ಲ? ಗೂಗಲ್‌ನಲ್ಲಿ ಯಾವುದಾದರೂ ವಿಷಯದ ಬಗ್ಗೆ ಸರ್ಚ್ ಮಾಡುವಾಗ ಮೊದಲು ಸಿಗುವ ಕೊಂಡಿ ವಿಕಿಪೀಡಿಯದ್ದೇ. ಈಗಾಗಲೇ ವಿಕಿಪೀಡಿಯದ ಇಂಗ್ಲಿಷ್ edition, most visited siteಗಳಲ್ಲಿ ಒಂದೆಂದು ಸ್ಥಾನ ಗಳಿಸಿದೆ. ಇಂತಿಪ್ಪ ವಿಕಿಪೀಡಿಯ ನಾಳೆ ಅಂದರೆ ನವೆಂಬರ್ ೧ರಂದು ಕನ್ನಡಿಗರಿಗೆಲ್ಲಾ ಒಂದು ಪರಮ ಸಂತೋಷದ ಸುದ್ದಿಯನ್ನು ನೀಡಲು ಮುಂದಾಗಿದೆ. "Karnataka" ಲೇಖನವನ್ನ ಅತ್ಯುತ್ತಮ ಲೇಖನಗಳಲ್ಲಿ ಒಂದು ಎಂದು ಪರಿಗಣಿಸಿರುವ ವಿಕಿಪೀಡಿಯ, ಕನ್ನಡ ರಾಜ್ಯೋತ್ಸವದ ಶುಭಸಂದರ್ಭದಲ್ಲಿ ಆ ಲೇಖನವನ್ನು ಮುಖಪುಟದಲ್ಲಿ ಪ್ರಕಟಿಸಲು ಮುಂದಾಗಿದೆ!
ನೀವು ಕರ್ನಾಟಕೆ ಇತಿಹಾಸಕ್ಕೆ ಸಂಬಂಧಿಸಿದ ಯಾವುದೇ ಲೇಖನವನ್ನು ವಿಕಿಪೀಡಿಯದಲ್ಲಿ ನೋಡಿ. ಎಲ್ಲಾ ಲೇಖನಗಳು Featured article ಅಥವ ಅತ್ಯುತ್ತಮ ಪಟ್ಟಿಗೆ ಸೇರಿವೆ. ಅತ್ಯಂತ ಸುಂದರ ಚಿತ್ರಗಳು, ಸ್ಪಷ್ಟ ವಿವರಣೆ ಹಾಗೂ ವಸ್ತುನಿಷ್ಟ ಬರಹಗಳಿಂದ ಬಹಳ ಜನರ ಮೆಚ್ಚುಗೆಗೆ ಲೇಖನಗಳು ಪಾತ್ರವಾಗಿವೆ. ಈ ಲೇಖನಗಳನ್ನ ಬರೆಯುವಲ್ಲಿ ಅಮೆರಿಕೆಯಲ್ಲಿ ನೆಲೆಸಿರುವ ದಿನೇಶ್ ಕನ್ನಂಬಾಡಿ ಎನ್ನುವವರ ಕೊಡುಗೆ ಅಪಾರ. ಇತಿಹಾಸಕ್ಕೆ ಸಂಭಂದಿಸಿದಂತೆ ಅವರ ಜ್ನಾನ ಅದ್ಭುತವಾದದ್ದು. ಕರ್ನಾಟಕ ಇತಿಹಾಸಕ್ಕೆ ಸಂಬಂಧಿಸಿದ ಲೇಖನಗಳು ವಿಕಿಪೀಡಿಯದಲ್ಲಿ ಸೊರಗುತ್ತಿದ್ದ ಸಂದರ್ಭದಲ್ಲಿ ಕರ್ನಾಟಕದ ಪತಾಕೆಯನ್ನು ಎತ್ತರಕ್ಕೆ ಹಾರಿಸಿವರು ಅವರು. ಅವರ ಜೊತೆ ಇನ್ನೂ ಕೆಲವು ಉತ್ಸಾಹಿಗಳು ಸೇರಿಕೊಂಡು ಕನ್ನಡ/ಕರ್ನಾಟಕಕ್ಕೆ ಸಂಬಂಧಿಸಿದ ಲೇಖನಗಳಿಗೆ ಕೊಡುಗೆ ನೀಡುತ್ತಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕೇವಲ ತಾಯ್ನಾಡಿನ ಗೌರವ ಉಳಿಸುವುದಕ್ಕೋಸ್ಕರ ವಿಕಿಪೀಡಿಯದಲ್ಲಿ ದುಡಿಯುತ್ತಿರುವ ಉತ್ಸಾಹಿಗಳಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು.
ಕನ್ನಡ ರಾಜ್ಯೋತ್ಸವದ ದಿನ ವಿಕಿಪೀಡಿಯದ ಮುಖಪುಟ ನೋಡಲು ಮರೆಯಬೇಡಿ. "Karnataka" ಲೇಖನ ಹಲವಾರು ಜನರ ಶ್ರದ್ದೆ, ಉತ್ಸಾಹ,ದುಡಿಮೆಯಿಂದ ರೂಪುಗೊಂಡದ್ದು. ಸುಮಾರು ಮೂರು ತಿಂಗಳ ಹಿಂದೆ ಅತ್ಯುತ್ತಮ ಲೇಖನ ಎಂಬ ಗೌರವ ಗಳಿಸಿತು. ಈಗ ಮುಖಪುಟದಲ್ಲಿ ಪ್ರಕಟವಾಗುತ್ತಿದೆ. ಸಂಭ್ರಮಿಸಲು ಇದಕ್ಕಿಂತ ಇನ್ನೇನು ಬೇಕು?
ಕನ್ನಡ ರಾಜ್ಯೋತ್ಸವದ ಶುಭಾಷಯಗಳು.
ಕರ್ನಾಟಕ ಲೇಖನದ ಲಿಂಕ್ - http://en.wikipedia.org/wiki/Karnataka
ವಿಕಿಪೀಡಿಯ ಮುಕಪುಟ - http://en.wikipedia.org/wiki/Main_Page

5 Comments:
ನಮಸ್ಕಾರ ಶ್ರೀಹರ್ಷ ಅವರೇ,
ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!
ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.
ಡೇಟು: 16 ಮಾರ್ಚ್ 2008
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು
ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.
ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.
ಅಲ್ಲಿ ಸಿಗೋಣ,
ಇಂತಿ,
-ಶ್ರೀಧರ
By
Sridhar Raju, at 7:44 PM
NAMASKAARA.
ONDVARSHA TADA NAANU AADRU OK...EEGA KALEETDINI ...TUMBAA SANTOSHA AAITU..NIMMA EE PRAYATNAKKE HATS OFF...
NAAVU NIMMONDIGE IRTEVE INMUNDE
THANKS..
CHANDAMAMA
By
chandamama, at 2:17 AM
This comment has been removed by the author.
By
chandamama, at 2:17 AM
NAMASKAARA.
ONDVARSHA TADA NAANU AADRU OK...EEGA KALEETDINI ...TUMBAA SANTOSHA AAITU..NIMMA EE PRAYATNAKKE HATS OFF...
NAAVU NIMMONDIGE IRTEVE INMUNDE
THANKS..
CHANDAMAMA
By
chandamama, at 2:24 AM
Namaskaara..
tumbaa khushiyaaitu..
inmunde naavuu nimmottige
chandamama
By
chandamama, at 2:26 AM
Post a Comment
<< Home