ತೋಚಿದ್ದು......ಗೀಚಿದ್ದು

Wednesday, May 17, 2006

ವಾಸ್ತವವೆಂಬ ಕಹಿಗೆ ಕಲ್ಪನೆಯೆಂಬ ಸಿಹಿ

ಬರೆಯಬೇಕು, ನಾನು ಬರೆದದ್ದು ಪ್ರಕಟವಾಗಬೇಕು ಎನ್ನುವುದು ನನ್ನ ಬಾಲ್ಯದ ಆಸೆ. ಆದರೆ ಏನನ್ನ ಬರೆಯುವುದು? ಕಥೆ ಕವನಗಳನ್ನ ಓದಲು ಬರುತ್ತೆ ಹೊರತು ಸ್ವಂತ ಬರೆಯಲು....ಉಹುಂ. ತಲೆಯ ಒಳಗೆ ಕಲ್ಪನಾಶಕ್ತಿ ಅನ್ನುವುದು ಸಂಪೂರ್ಣ ಸೊನ್ನೆಯಾಗಿರುವುದೇ ಇದಕ್ಕೆ ಕಾರಣ. ಆದರೆ ಲಘು ಪ್ರಬಂಧಗಳನ್ನ, ಹರಟೆಗಳನ್ನ ಬರೆಯಬಲ್ಲೆ. ದುರಾದೃಷ್ಟವಶಾತ್ ಇಂತ ಕೆಲಸಕ್ಕೆ ಬಾರದ ಹರಟೆಗಳನ್ನು ಯಾವುದೇ ಭಾಷೆಯ ಯಾವುದೇ ಪತ್ರಿಕೆಯೂ ಪ್ರಕಟಿಸುವುದಿಲ್ಲವೇ. ಹಾಗಾಗಿ ಅಖಂಡ ೨೪ ವರ್ಷಗಳ ಕಾಲ ಬರೆದು ಪ್ರಕಟಿಸಬೇಕು ಅನ್ನುವ ಅದಮ್ಯ ಆಸೆಯನ್ನ ಕಷ್ಟಪಟ್ಟು ಸಹಿಸಿಕೊಂಡಿದ್ದೆ. ಆದರೂ ಕೆಲವೊಮ್ಮೆ ನಾನು ಬರೆದ ಕವನಗಳನ್ನ ಸ್ನೇಹಿತರಿಗೆ ಓದಲು ಕೊಟ್ಟು ಅವರಿಂದ ಹೊಡೆತ ತಿಂದದ್ದೂ ಇದೆ ಬಿಡಿ. ಈಗ ಯಾರು ಓದಲಿ ಬಿಡಲಿ, ನಾನಂತು ಒಂದಾದ ಮೇಲೊಂದರಂತೆ ಲೇಖನ ಪ್ರಕಟಿಸಬಹುದು ಎನ್ನುವ ವಿಚಾರವೇ ನನಗೆ thrill ಉಂಟುಮಾಡುತ್ತಾ ಇದೆ. ಎಕ್ಸಾಮು ಮಣ್ಣು ಮಸಿಗಳ ನಡುವೆ ಇಷ್ಟು ದಿನ ಬ್ಲಾಗಿಸಲು ಆಗಿರಲಿಲ್ಲ. ಇನ್ನು ಮುಂದೆ ಬ್ಲಾಗಿಸಲು ಯಾವುದೇ ಅಡಚಣೆಯೂ ಕಾಣಿಸುತ್ತಿಲ್ಲ. ವಾಸ್ತವದ ಕಹಿಗೆ ಕಲ್ಪನೆಯ ಸಿಹಿಯನ್ನು ಸೇರಿಸಿದಾಗ ದೊರೆಯುವ ಸಮರಸದ ಜೀವನವನ್ನ ಹೊಸ ದೃಷ್ಟಿಕೋನದಿಂದ ನೋಡಲು ಇದು ಅಗತ್ಯ ಎಂಬುದು ನನ್ನ ನಂಬಿಕೆ.